Print this page

ಮಡುವಿನಕೋಡಿ ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ.

ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವದ ಸಂಭ್ರಮ. ಸಾವಿರಾರು ಭಕ್ತಾಧಿಗಳು ರಥೋತ್ಸವದಲ್ಲಿ ಭಾಗಿ

ಕೃಷ್ಣರಾಜಪೇಟೆ  :ತಾಲ್ಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ಗ್ರಾಮರಕ್ಷಕ ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಸಂಭ್ರಮ ಸಡಗರದಿಂದ ಜರುಗಿತು.ಉಘೇ..ಆಂಜನೇಯ ಉಘೇ ಉಘೇ ಎಂದು ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು. ಶಾಸಕ ಡಾ.ನಾರಾಯಣಗೌಡ ರಥದಲ್ಲಿ ವಿರಾಜಮಾನವಾಗಿದ್ದ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಗೆ ಸಾಂಕೇತಿಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು.   ಸಾವಿರಾರು ಜನರು ರಥೋತ್ಸವದಲ್ಲಿ ಭಾಗವಹಿಸಿ. ರಥದಲ್ಲಿ ವಿರಾಜಮಾನವಾಗಿದ್ದ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಗೆ ಸಾಂಕೇತಿಕ ಪೂಜೆ ಸಲ್ಲಿಸಿದರು.ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆನಂದೇಗೌಡ ಅವರ ನೇತೃತ್ವದಲ್ಲಿ ಬಿಗಿಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Share this article

About Author

Madhu