ಟಿಎಪಿಸಿಎಂಎಸ್ ವತಿಯಿಂದ ನೂತನ ಪೆಟ್ರೋಲ್ ಬಂಕ್ ಶಂಕುಸ್ಥಾಪನೆ.
ಮಳವಳ್ಳಿ : ಮಳವಳ್ಳಿ ಪಟ್ಟಣದ ಮದ್ದೂರು ಮುಖ್ಯರಸ್ತೆಯ ಟಿಎಪಿಸಿಎಂಎಸ್ ಹಳೆಯ ಕಟ್ಟಡದಲ್ಲಿ ನೂತನ ಪೆಟ್ರೋಲ್ ಬಂಕ್ ಶಂಕುಸ್ಥಾಪನೆಯನ್ನು ಟಿಎಪಿಸಿಎಂಎಸ್ ಅಧ್ಯಕ್ಷ ಡಾ ಚೌಡೇಶ್ ರವರು ನೇರವೇರಿಸಿದರು. ಮಳವಳ್ಳಿ ಪಟ್ಟಣದ ಮದ್ದೂರು ಮುಖ್ಯ ರಸ್ತೆ ಗೆ ಹೊಂದಿಕೊಂಡಂತೆ ಟಿಎಪಿಸಿಎಂಎಸ್ ಜಾಗದಲ್ಲಿ ಪೆಟ್ರೋಲ್ ಬಂಕ್ ತೆರಯಲು ಕಮಿಟಿಯಲ್ಲಿ ತೀರ್ಮಾನಿಸಲಾಗಿತ್ತು ಅಂತೆಯೇ ಇಂದು ಟಿಎಪಿಸಿಎಂಎಸ್ ಅಧ್ಯಕ್ಷ ಡಾ. ಚೌಡೇಶ್ ರವರು ಶಂಕುಸ್ಥಾಪನೆ ನೇರವರಿಸಿದರು. ನಂತರ ಮಾತನಾಡಿ ನಮ್ಮ ಟಿಎಪಿಸಿಎಂಎಸ್ ಸಾಕಷ್ಟು ಬೆಳೆದಿದೆ, ಈಗಾಗಲೇ ಟಿಎಪಿಸಿಎಂಎಸ್ ಮಳಿಗೆ, ತೆರೆದಿದ್ದು, ಅಕ್ಕಿ ಸಂಗ್ರಹ ಗೋದಾಮು ಉದ್ಘಾಟಿಸಿದ್ದು. ಹಂತಹಂತವಾಗಿ ಪ್ರಗತಿ ಕಾಣುತ್ತಿದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ನಿರ್ವಹಣೆ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮ ದಲ್ಲಿ ಟಿಎಪಿಸಿಎಂಎಸ್ ಉಪಾಧ್ಯಕ್ಷ ಬಸವರಾಜು, ನಿರ್ದೇಶಕ ರಾದ ಕನ್ನಳ್ಳಿಸುಂದ್ರಪ್ಪ, ಕೆ.ಜೆ ದೇವರಾಜು, ಚಿಕ್ಕರಾಜು ಸೇರಿದಂತೆ ಮತ್ತಿತ್ತರು ಇದ್ದರು