Print this page

ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ಮಠಾಧೀಶರ ತಂಡ ಗುಡಿಗೆರೆ ಗ್ರಾಮಕ್ಕೆ ಬೇಟಿ ನೀಡಿ ಹುತಾತ್ಮ ಯೋಧ ಗುರು ಕುಟುಂಬಕ್ಕೆ ಸಾಂತ್ವನ .

 ಮಳವಳ್ಳಿ ತಾಲ್ಲೂಕು ಹಾಗೂ ಕನಕಪುರ ಮತ್ತು ಟಿ.ನರಸೀಪುರ ತಾಲ್ಲೂಕಿನ ವೀರಶೈವ ಮಠಾಧೀಶರ ತಂಡ ಗುಡಿಗೆರೆ ಗ್ರಾಮಕ್ಕೆ ಬೇಟಿ ನೀಡಿ ಹುತಾತ್ಮ ಯೋಧ ಗುರು ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮಳವಳ್ಳಿ: ಗುಡಿಗೆರೆ ಕಾಲೋನಿಯ ಗುರು ನಿವಾಸಕ್ಕೆ ಕನಕಪುರ ದೇಗುಲ ಮಠದ ಮಠಾಧಿಪತಿ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ಮಠಾಧೀಶರ ತಂಡ ಭೇಟಿ ನೀಡಿ ಸಾಂತ್ವನ ಹೇಳಿದರು ತಾಲೂಕಿನ ಬಿಜಿಪುರ ಹೊರಮಠದ ಚಂದ್ರಶೇಖರಸ್ವಾಮೀಜಿ,,ಕುಂದೂರುಬೆಟ್ಟದ ರಸ ಸಿದ್ದೇಶ್ವರ ಮಠದನಂಜುಂಡಸ್ವಾಮಿಜೀ. ಹಣಕೊಳ, ರಾಗಿಬೊಮ್ಮನಹಳ್ಳಿಮಠ,ಸರಗೂರುಮಠ, ಬ್ರಹ್ಮನ್ ಮಠ, , ಗವಿ ಮಠ, ಧನಗೂರು ಷಡಕ್ಷರ ದೇವರ ಮಠ ಸೇರಿದಂತೆ ಹಲವು ಮಠಾಧಿಪತಿಗಳಿಂದ ಗುರು ಪತ್ನಿ ಕಲಾವತಿ, ತಾಯಿ ಚಿಕ್ಕತಾಯಮ್ಮ, ತಂದೆ ಹೊನ್ನಯ್ಯ ಸೇರಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಗುರು ಅಂತ್ಯ ಸಂಸ್ಕಾರ ಸ್ಥಳಕ್ಕೆ ತೆರಳಿ ವೀರ ಯೋದ ಗುರು ಸಮಾಧಿಗೆ ಪೂಜೆ ಸಲ್ಲಿಸಿದರು.ಇದೇ ವೇಳೆ ಒಂದು ಲಕ್ಷ ರೂ ಹಣವನ್ನು ನೀಡುವ ಮೂಲಕ ಕುಟುಂಬಕ್ಕೆ ನೆರವು ನೀಡಲಾಯಿತು. ನಂತರ ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಮಾತನಾಡಿ , ದೇಶಕ್ಕಾಗಿ ವೀರಮರಣ ಹೊಂದಿದ ಗುರುರವರ ಕುಟುಂಬದವರಿಗೆ ದೇವರು ಧೈರ್ಯ ಹಾಗೂ ದುಃಖ ಭರಿಸುವಂತಹ ಶಕ್ತಿ ನೀಡಲಿ, ಒಂದು ಬಡಕುಟುಂಬದಿಂದ ಹೋಗಿ ದೇಶ ಕಾಯುವ ಇಂತಹ ಯೋದನಿಗೆ ನಮ್ಮನಮನ ಎಂದರು. ಯೋಧಗುರು ಜೊತೆ ಇನ್ನೂ 48 ಮಂದಿ ಸಹ ವೀರಮರಣ ಹೊಂದಿದ್ದಾರೆ. ಇಡೀ ಸರ್ಕಾರವೇ ಗುರುರವರ ಅಂತ್ಯಕ್ರಿಯೆ ಯಲ್ಲಿ ಭಾಗವಹಿಸಿದ್ದು , ನಮ್ಮೆಲ್ಲರ ಭಾಗ್ಯ, ನಮ್ಮರಾಜ್ಯದಲ್ಲೂ ಅನೇಕರು ದೇಶವನ್ನು ಕಾಯುವ ಕಾಯಕ ಮಾಡುತ್ತಿದ್ದಾರೆ ಎನ್ನುವುದು ಹೆಮ್ಮಯ ಸಂಗತಿ ಎಂದರು ಇದೇ ವೇಳೆ ಗುರು ಕುಟುಂಬದವರಿಗೆ ರಾಜ್ಯದ ಮೂಲೆಮೂಲೆಯಿಂದ ಜನರ ಹಿಂಡೆ ಬರುತ್ತಿದ್ದು , ಯೋಧಗುರು ದೇಶಭಕ್ತಿ ಯನ್ನು ತೋರಿಸುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಮಳವಳ್ಳಿ ತಾಲ್ಲೂಕಿನ ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಕುಂದೂರು ಮೂರ್ತಿ , ಮಾಜಿ ತಾ.ಪಂ ಅಧ್ಯಕ್ಷ ವಿಶ್ವಾಸ್ , ವೀರಶೈವ ನೌಕರರ ಸಂಘದ ತಾಲ್ಲೂಕುಅಧ್ಯಕ್ಷ ಗಂಗಾಧರ್, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Share this article

About Author

Madhu