Print this page

ಉಗ್ರರ ದುಷ್ಕೃತ್ಯವನ್ನು ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಪಂಜಿನ ಮೆರವಣಿಗೆ.ರಸ್ತೆ ತಡೆ ನಡೆಸಿ ಪಾಕಿಸ್ತಾನಕ್ಕೆ ಎಚ್ಚರಿಕೆ..

ಕೆ.ಆರ್.ಪೇಟೆ ಹಿಂದೂಪರ ಸಂಘಟನೆಗಳಿಂದ ಉಗ್ರರ ದುಷ್ಕೃತ್ಯವನ್ನು ಖಂಡಿಸಿ ಪಂಜಿನ ಮೆರವಣಿಗೆ . ಮಾನವಸರಪಳಿ ರಚಿಸಿ ರಸ್ತೆ ತಡೆ.ಪಾಪಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ದೇಶಭಕ್ತರು. 

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಹಿಂದೂ ಪರಸಂಘಟನೆಗಳಿಂದ ಹುತಾತ್ಮ ಯೋಧರ ಪರವಾಗಿ ಪಂಜಿನ ಮೆರವಣಿಗೆ ನಡೆಸಿ ಪಾಕಿಸ್ತಾನದ ಪಾಪಿ ಕೃತ್ಯದ ವಿರುದ್ಧ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ದೇಶಭಕ್ತರು.ಶಿಖಂಡಿಯಂತೆ ಮೋಸದಿಂದ ಆರ್ ಡಿ ಎಕ್ಸ್ ಸ್ಪೋಟಕಗಳಿಂದ ತುಂಬಿದ್ದ ವಾಹನವನ್ನು ಸಿಆರ್ ಪಿಎಫ್ ಯೋಧರು ಸಾಗುತ್ತಿದ್ದ ಬಸ್ಸಿಗೆ ಢಿಕ್ಕಿ ಹೊಡಿಸಿ 50ಕ್ಕೂ ಹೆಚ್ಚಿನ ಯೋಧರ ಮಾರಣ ಹೋಮ ನಡೆಸಿದ ಪಾಕಿಸ್ತಾನದ ಕೃತ್ಯವನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರಾದ ಬಾಲು, ನಟರಾಜು, ಹೆಚ್.ಬಿ. ಮಂಜುನಾಥ ಮತ್ತು ಡಾ. ಕೆ.ಆರ್.ನೀಲಕಂಠ ಖಂಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.ಪಟ್ಟಣದ ಮುಖ್ಯ ರಸ್ತೆಯಲ್ಲಿ ಪಂಜನ್ನು ಕೈಯ್ಯಲ್ಲಿ ಹಿಡಿದುಕೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ದುರ್ಗಾಭವನ್ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ನೂರಾರು ಯುವಜನರು ಹಾಗೂ ದೇಶಭಕ್ತರು ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಪಾಕಿಸ್ತಾನದ ಪಾಪಿಕೃತ್ಯವನ್ನು ಖಂಡಿಸಿದರು. ಪಟ್ಟಣ ಪೋಲಿಸರು ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು.

Share this article

About Author

Madhu