Print this page

ಶಾಸಕ ನಾರಾಯಣಗೌಡರು ಜೆಡಿಎಸ್ ಪಕ್ಷದ ಶಿಸ್ತಿನ ಸಿಪಾಯಿ.ಆಪರೇಷನ್ ಕಮಲ ಮಾಡಲು ಸಾಧ್ಯವಿಲ್ಲ. ಎಪಿಎಂಸಿ ಮಾಜಿಅಧ್ಯಕ್ಷ ಕೆ.ಎನ್.ಕೃಷ್ಣ

ಶಾಸಕ ನಾರಾಯಣಗೌಡರು ಜೆಡಿಎಸ್ ಪಕ್ಷದ ಶಿಸ್ತಿನ ಸಿಪಾಯಿ.ಅವರನ್ನು ಆಪರೇಷನ್ ಕಮಲ ಮಾಡಲು ಯಡಿಯೂರಪ್ಪ ಅವರಿಂದ ಸಾಧ್ಯವಿಲ್ಲ.ಯಡಿಯೂರಪ್ಪ ಮತ್ತೆ ಸಿಎಂ ಆಗಲು ಹಗಲುಗನಸು ಕಾಣುತ್ತಿದ್ದಾರೆ ಎಪಿಎಂಸಿ ಮಾಜಿಅಧ್ಯಕ್ಷ ಕೆ.ಎನ್.ಕೃಷ್ಣ ಆಕ್ರೋಶ.

ಕೆ.ಆರ್.ಪೇಟೆ : ಕೃಷ್ಣರಾಜಪೇಟೆ ಶಾಸಕ ಡಾ.ನಾರಾಯಣಗೌಡ ಜೆಡಿಎಸ್ ಪಕ್ಷದ ಶಿಸ್ತಿನ ಸಿಪಾಯಿ.ಅವರು ಅನಾರೋಗ್ಯದಿಂದಾಗಿ ಸದನಕ್ಕೆ ಹಾಜರಾಗಿಲ್ಲ.ಬಿಜೆಪಿ ಮುಖಂಡರು ಅಪಪ್ರಚಾರ ಮಾಡುತ್ತಿರುವಂತೆ ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ.ಬಿಜೆಪಿ ಮುಖಂಡರು ಶಾಸಕ ನಾರಾಯಣಗೌಡರ ವಿರುದ್ಧ ಅಪಪ್ರಚಾರ ಮಾಡಿದರೆ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ ಎಚ್ಚರಿಕೆ. ತಂದೆ-ತಾಯಿಗಳನ್ನು ಕಳೆದುಕೊಂಡಿರುವ ಶಾಸಕ ನಾರಾಯಣಗೌಡರು ಮಾಜಿಪ್ರಧಾನಿ ದೇವೇಗೌಡರು ಮತ್ತು ಚನ್ನಮ್ಮ ಅವರನ್ನು ತಂದೆತಾಯಿಗಳ ರೂಪದಲ್ಲಿ ಕಾಣುತ್ತಿದ್ದಾರೆ ಎಂದು ಕೃಷ್ಣ ತಿಳಿಸಿದರು. ಕೆ.ಆರ್.ಪೇಟೆ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಅಪಪ್ರಚಾರಗಳಿಗೆ ಕಿವಿಗೊಡದೇ ಜೆಡಿಎಸ್ ಪಕ್ಷದ ಬಲವರ್ಧನೆ ಹಾಗೂ ಸಂಘಟನೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ನಾಗರಾಜೇಗೌಡ ನಿರ್ದೇಶಕರಾದ ಲೋಕೇಶ್, ಐನೋರಹಳ್ಳಿ ಮಲ್ಲೇಶ್ ಉಪಸ್ಥಿತರಿದ್ದರು.

 

Share this article

About Author

Madhu