Print this page

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಗೆಲುವಿಗೆ ಪ್ರಾಮಾಣಿಕವಾಗಿ ದುಡಿಯಬೇಕು..ಬಿಜೆಪಿ ಜಿಲ್ಲಾಧ್ಯಕ್ಷ ನಾಗಣ್ಣ.

ಮಂಡ್ಯ ಜಿಲ್ಲಾ ಬಿಜೆಪಿ ಘಟಕವು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಗೆಲುವಿಗೆ ಪ್ರಾಮಾಣಿಕವಾಗಿ ದುಡಿಯಬೇಕು ಎಂದು ಜಿಲ್ಲಾಧ್ಯಕ್ಷರಾದ ನಾಗಣ್ಣನವರು ಮನವಿ ಮಾಡಿದರು .

ಮಂಡ್ಯ:   ಜಿಲ್ಲಾ ಜನರ ಸ್ವಾಭಿಮಾನವನ್ನು ಎತ್ತಿ ಹಿಡಿಯಲು ಸುಮಲತಾ ಅವರನ್ನು ಬೆಂಬಲಿಸಿ ವಿಜಯಮಾಲೆಯನ್ನು ತೊಡಿಸಿ ಹೊಸ ಇತಿಹಾಸವನ್ನು ನಿರ್ಮಾಣ ಮಾಡುವಂತೆ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಬಿಜೆಪಿ ಪಕ್ಷದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು . ವಂಶಪಾರಂಪರ್ಯ ಆಡಳಿತವನ್ನು ಕೊನೆಗಾಣಿಸಿ ಮಂಡ್ಯ ಜಿಲ್ಲೆಯ ಜನರ ಸ್ವಾಭಿಮಾನವನ್ನು ಎತ್ತಿ ಹಿಡಿಯಲು ನಮ್ಮ ಮನೆ ಮಗಳಾದ ಸಮಲತಾ ಅಂಬರೀಶ್ ಅವರನ್ನು ಗೆಲ್ಲಿಸಿ ಜಿಲ್ಲೆಯಲ್ಲಿ ಹೊಸ ರಾಜಕೀಯ ಮನ್ವಂತರಕ್ಕೆ ನಾಂಧಿ ಹಾಡಬೇಕು ಎಂದು ನಾಗಣ್ಣಗೌಡ ಕರೆ ನೀಡಿದರು.

ಅಪ್ಪ ಮಕ್ಕಳು ಮೊಮ್ಮಕ್ಕಳು ಎಲ್ಲ ಸೇರಿ ದೇಶವನ್ನು ಆಡಬೇಕು ಎಂದು ಪಣ ತೊಟ್ಟಿದ್ದಾರೆ .ಬೇರೆಯವರಿಗೆ ನಮ್ಮ ಮಂಡ್ಯದಲ್ಲಿ ಟಿಕೆಟ್ ಕೊಟ್ಟಿದ್ದರೆ ನಮ್ಮ ಅಭ್ಯಂತರ ಆಗುತ್ತಿರಲಿಲ್ಲ .ಅಪ್ಪ ಪ್ರಧಾನಿ ಮಗ ಮುಖ್ಯಮಂತ್ರಿ ಮಕ್ಕಳು ಸಂಸದರು ಸೊಸೆಯರು ಸಂಸದರು ಆಗಬೇಕು ಎಂದು ಅವರ ಅನಿಸಿಕೆ ,ಹೀಗಾಗಿ ಅವರಿಗೆ ತಕ್ಕ ಪಾಠವನ್ನು ಕಲಿಸಬೇಕು ಎಂದು ಕಿವಿಮಾತು ಹೇಳಿದರು .

ತಾಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜುನಾಥ್, ಮುಖಂಡರಾದ ವರದರಾಜೇಗೌಡ, ಬೂಕಹಳ್ಳಿ ಹರೀಶ್, ಭರತ್ ಕುಮಾರ್, ಮಧುಸೂದನ್ ಮತ್ತಿತರರು ಉಪಸ್ಥಿತರಿದ್ದರು..

Share this article

About Author

Madhu

Media