Print this page

ಶ್ರೀ ಡಾ.ಶಿವಕುಮಾರಸ್ವಾಮಿಜೀರವರ ಪುಣ್ಯಸ್ಮರಣೆಯ ಪೂರ್ವಭಾವಿ ಸಭೆ.

  ನಡೆದಾಡುವ ದೇವರು , ಕರ್ನಾಟಕ ರತ್ನ  ಪರಮಪೂಜ್ಯ ಶ್ರೀ ಶ್ರೀ ಶ್ರೀ  ಡಾ.ಶಿವಕುಮಾರಸ್ವಾಮಿಜೀರವರ ಪುಣ್ಯಸ್ಮರಣೆಯನ್ನು ಸರ್ವಜನಾಂಗ ಸೇರಿ  ಇದೇ ಫೆ 19 ರಂದು ಮಳವಳ್ಳಿ ಪಟ್ಟಣದಲ್ಲಿ  ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು

ಮಳವಳ್ಳಿ: ಮಳವಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ  ತಾಲ್ಲೂಕು ಅಧ್ಯಕ್ಷ. ಕುಂದೂರು ಮೂರ್ತಿ ರವರ ಅಧ್ಯಕ್ಷತೆಯಲ್ಲಿ ಶ್ರೀ ಗಳ   ಪುಣ್ಯಸ್ಮರಣೆ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಯಜಮಾನ ವೆಂಕಟಪ್ಪರವರು ಮಾತನಾಡಿ ವೀರಶೈವ ಜನಾಂಗದವರು  ಎಲ್ಲಾ ಸಮಾಜವನ್ನು ಒಗ್ಗೂಡಿಸಲು ಮುಂದಾಗಿರುವುದು  ಸಂತಸದ ವಿಷಯ   ನಾವೆಲ್ಲರೂ ಎಂದಿಗೂ ಜೊತೆಯಾಗಿ ಪಟ್ಟಣ ಹಾಗೂ ತಾಲ್ಲೂಕು ಅಭಿವೃದ್ಧಿ ಮಾಡೋಣ ಎಂದರು. ಇನ್ನೂ  ಹಿರಿಯ ಮುಖಂಡ ಎಂ.ಹೆಚ್ ಕೆಂಪಯ್ಯ  ಮಾತನಾಡಿ , ವೀರಶೈವ ಜನಾಂಗದವರು   ಎಲ್ಲಾ ಜನಾಂಗದ  ಜೊತೆಗೂಡಿ ಶ್ರೀ ಗಳ   ಪುಣ್ಯಸ್ಮರಣೆ  ಮಾಡೋಣ ಎಂದರು ವೀರಶೈವ ಅಭಿವೃದ್ಧಿ ದೃಷ್ಟಿಯಿಂದ  ರಾಜಕೀಯ ಬಿಡುವಂತೆ ಮುಖಂಡರನ್ನು ಮನವಿ ಮಾಡಿದರು  ಶ್ರೀಗಳ  ನೆನಪು ಮಾಡುವ ಕಾರ್ಯಕ್ರಮದಲ್ಲಿ  ನಾವು ಭಾಗವಹಿಸುತ್ತವೆ ಎಂದರು. ಕಾರ್ಯಕ್ರಮಕ್ಕೆ ಸರ್ವಧರ್ಮದ ಜನಾಂಗದ ಸ್ವಾಮೀಜಿ , ಹಿಂದೂ .ಮುಸ್ಲಿಂ , ಕೈಸ್ತ  ಧರ್ಮದ  ಮುಖಂಡರು ಕರೆಯುವಂತೆ ತೀರ್ಮಾನಿಸಲಾಯಿತು.

ಸಭೆಯಲ್ಲಿ  ತಾ.ಪಂ ಉಪಾಧ್ಯಕ್ಷ ಮಾಧು, ವೀರಶೈವ ನೌಕರರ ಸಂಘದ ಅಧ್ಯಕ್ಷ ಗಂಗಾಧರ್,  ಕುಂದೂರು ಪ್ರಕಾಶ, ಪುರಸಭೆ ಸದಸ್ಯರಾದ  ಚಿಕ್ಕರಾಜು, ನಾಗೇಶ್, ಸೇರಿದಂತೆ ಮತ್ತಿತ್ತರು ಇದ್ದರು.

Share this article

About Author

Madhu