Print this page

ಇಲ್ಲಿ ಗೋಡೆಗಳೆ ಶೌಚಾಲಯ .ಹೆಸರಿಗೆ ಮಾತ್ರವೇ ಸ್ವಚ್ಛ ಭಾರತ

   ಇಲ್ಲಿ ಗೋಡೆಗಳೆ ಶೌಚಾಲಯ .ಹೆಸರಿಗೆ ಮಾತ್ರವೇ ಸ್ವಚ್ಛ ಭಾರತ

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯ ತಾಲ್ಲೂಕು ಆಫೀಸ್ ಬಳಿ ಯಾವುದೇ ಸ್ವಚ್ಛತೆ ಇಲ್ಲದೆ ಕೊಳಚೆ ಗುಂಡಿಯಾಗಿದೆ .ಇದಕ್ಕೆ ಕಾರಣ ಯಾವುದೇ ಶೌಚಾಲಯ ಇಲ್ಲಾ ಮತ್ತು ಕಸ ಸಂಗ್ರಹಣೆ ಮಾಡಲು ಯಾವುದೇ ಕಸದ ತೊಟ್ಟಿಗಳು ಸಹ ಇಲ್ಲಾ.
ಕಛೇರಿ ಯ ಸುತ್ತಲೂ ಕಸದ ರಾಶಿ ಬಿದ್ದಿದ್ದು ಇದು ಅಧಿಕಾರಿಗಳ ಗಮನಕ್ಕೆ ಬಂದರು ಯಾವುದೇ ಸ್ವಚ್ಛತಾ ಕಾರ್ಯ ಮಾಡಿಲ್ಲಾ .

ಬರಿ ಹೆಸರಿಗೆ ಮಾತ್ರವೇ ಅಧಿಕಾರಿಗಳು ಬಯಲು ಮುಕ್ತ ಶೌಚಾಲಯ ಮಾಡಲು ಹೊರಟ್ಟಿದ್ದಾರೆ ಅದರೆ ಕಚೇರಿಯ ಮುಂದೆಯೆ ಕೊಳಚೆ ಗುಂಡಿಯಾಗಿದ್ದು ಜನರು ಮೂತ್ರ ವಿಸರ್ಜನೆ ಗೆ ಹಳೆಯ ಕಚೇರಿ ಯ ಗೋಡೆಗಳನ್ನು ಉಪಯೋಗ ಮಾಡತ್ತಿದ್ದರೆ.

ಇಲ್ಲಿಗೆ ದಿನನಿತ್ಯ ರೈತರು, ಮಹಿಳೆಯರು, ವೃದ್ಧರು ತಮ್ಮ ಕೆಲಸ ಕಾರ್ಯಗಳಿಗೆ ಬರುತ್ತಾರೆ ಅದರೆ ಇಲ್ಲಿ ಯಾವುದೇ ಶೌಚಾಲಯ ಇಲ್ಲದೆ ಪರದಾಡುವ ಪರಿಸ್ಥಿತಿ ಇದೆ .ಅದರೆ ಇಲ್ಲಿ ಒಂದು ಶೌಚಾಲಯ ಇದ್ದು ಇದರ ನಿರ್ವಹಣೆ ಮಾಡದೆ ಬೀಗ ಜಡಿದ್ದಿದ್ದಾರೆ .

 ಇಲ್ಲಿ ಬರುವ ಮಹಿಳೆಯರ ಕಥೆ ದೇವರೆ ಕೇಳಬೇಕು ಯಾಕೆಂದರೆ ಇಲ್ಲಿ ಜನಸಂದಣಿ ಇರುವುದರಿಂದ ಅವರು ಶೌಚಾಲಯ ಇಲ್ಲದೆ ಪರದಾಡುತ್ತಾರೆ .ಇದರ ಬಗ್ಗೆ ಅಧಿಕಾರಿಗಳು ಗಮನಕ್ಕೆ ತಂದರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲಾ.

ಅದರೆ ಸರ್ಕಾರದ ಹಣವನ್ನು ಸ್ವಚ್ಛ ಭಾರತ ಹೆಸರಿನಲ್ಲಿ ಶೌಚಾಲಯ ಮಾಡುವ ಬದಲು ಇಲ್ಲಿ ಇರುವ ಶೌಚಾಲಯವನ್ನು ಸ್ವಚ್ಛಗೊಳಿಸಿ ಜನರ ಉಪಯೋಗ ನೀಡಿ ಅದರ ನಿರ್ವಹಣೆ ಮಾಡಲು ಸಿಬ್ಬಂದಿ ನೇಮಿಸುವ ಕೆಲಸ ಮಾಡಬೇಕು .

ಇಲ್ಲದಿದ್ದರೆ ಕಚೇರಿಯ ಮುಂದೆಯೆ ಮೂತ್ರ ವಿಸರ್ಜನೆ ಮಾಡತ್ತಿವಿ ಎಂದು ಸಾರ್ವಜನಿಕರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Last modified on 20/07/2018

Share this article

About Author

Madhu