Print this page

ರಸ್ತೆ ಮಾಡದಿದ್ದರೆ ಚುನಾವಣೆ ಬಹಿಷ್ಕಾರ ಎಂದು ಶಾಸಕರಿಗೆ ಎಚ್ಚರಿಕೆ.

ರಸ್ತೆ ಮಾಡದಿದ್ದರೆ ಚುನಾವಣೆ ಬಹಿಷ್ಕಾರ ಎಂದು ಶಾಸಕರಿಗೆ ಎಚ್ಚರಿಕೆ.

ಮಂಡ್ಯ ಜಿಲ್ಲೆಯ ಕೆ. ಆರ್.ಪೇಟೆ ತಾಲೋಕು ಸಂತೇಬಾಚಹಳ್ಳಿ ಹೋಬಳಿಯ, ಹಿರಿಸಾವೆ  ಇಂದ ಕೆ ಆರ್ ಪೇಟೆ ಮಾರ್ಗವಾಗಿ ಮೈಸೂರಿಗೆ ಸಂಪರ್ಕ  ಕಲ್ಪಿಸುವ ರಸ್ತೆ ಇದಾಗಿದ್ದು ,ಸಂತೆಬಾಚಹಳ್ಳಿ ದೊಡ್ಡಕ್ಯಾತನಳ್ಳಿ ಮಾರ್ಗವಾಗಿ ಹಾದು ಹೋಗುತ್ತದೆ . ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು   ಗ್ರಾಮಸ್ಥರು  ಹಾಗೂ ವಾಹನ ಚಾಲಕರಿಗೆ ತೊಂದರೆಯಾಗಿದೆ ಮತ್ತು ಅಪಘಾತ ಸಂಭವಿಸುತ್ತವೆ.

ಈ ವಿಷಯವಾಗಿ  2ಬಾರಿ  ಶಾಸಕರು ಆದ ಕೆಸಿ ನಾರಾಯಣಗೌಡರ ಗಮನಕ್ಕೆ ತಂದರು ಯಾವುದೇ ರೀತಿಯ ಅಭಿವೃದ್ಧಿ ಮಾಡಿಲ್ಲ ಎಂದು ನೇರವಾಗಿ ಆರೋಪಿಸಿದ್ದಾರೆ. 
ರೊಚ್ಚಿಗೆದ್ದ ಮಹಿಳೆಯರು ನಮ್ಮ ಹೋಬಳಿ ಅವರಕಣ್ಣಿಗೆ ಕಾಣುತ್ತಿಲ್ಲ, ಎರಡು ಚುನಾವಣೆ ವೇಳೆ ಭರವಸೆ ಕೊಟ್ಟಿಹೋದವರು ಗಮನ ಹರಿಸಿಲ್ಲಾ  ಎಂದು ಶಾಸಕರ ವಿರುದ್ಧ  ಧ್ವನಿ ಎತ್ತಿದ್ದಾರೆ.

ಸುಮಾರು 12 ವರ್ಷದಿಂದ ಈ ರಸ್ತೆ ಯ ಕಾಮಗಾರಿ ಮಾಡಿಲ್ಲಾ ,ಅದರಿಂದಾಗಿ  ಸಂತೇಬಾಚಳ್ಳಿ ಯಲ್ಲಿ ನಡೆಯುವ ಮಾರುಕಟ್ಟೆಗೆ  ಮತ್ತು ಕೆ ಆರ್ ಪೇಟೆಗೆ ಹೋಗಲು ತೊಂದರೆಯಾಗತ್ತಿದೆ ಮತ್ತು ದಿನನಿತ್ಯ ಮಕ್ಕಳು ಇದೆ ಮಾರ್ಗವಾಗಿ ಶಾಲೆಗೆ ಹೋಗಬೇಕು ಇದರಿಂದ ತುಂಬ ತೊಂದರೆ ಅನುಭಯಿಸುತ್ತಿದ್ದೇವೆ ಎಂದು ಗ್ರಾಮಸ್ಥರು ಅಧಿಕಾರ ಗಳಿಗೆ ಶಾಪ ಹಾಕಿದ್ದರು..

ಕೂಡಲೆ ರಸ್ತೆಕಾಮಗಾರಿ ಮಾಡದಿದ್ದರೆ  ನಮ್ಮ ಹೋಬಳಿ ಜನ ಚುನಾವಣೆ ಬಹಿಷ್ಕಾರ ಮಾಡಿ ಉಗ್ರವಾದ ಪ್ರತಿಭಟನೆ ಮಾಡುತ್ತವೆ ಎಂದು ಎಚ್ಚರಿಕೆ ಕೊಟ್ಟರು.. ..

Last modified on 19/07/2018

Share this article

About Author

Madhu