Print this page

ಹೇಮಾವತಿ ಎಡದಂಡ ನಾಲಾ ಕಾಮಗಾರಿಯಲ್ಲಿ ಭಾರೀ ಗೋಲ್ ಮಾಲ್..

ಹೇಮಾವತಿ ಎಡದಂಡ ನಾಲಾ ಕಾಮಗಾರಿಯಲ್ಲಿ ಭಾರೀ ಗೋಲ್ ಮಾಲ್.. ಕಳಪೆ ಕೆಲಸ ನಡೆಸಿ ಸರ್ಕಾರದ ಹಣವನ್ನು ಕೊಳ್ಳೆ ಹೊಡೆದಿರುವ ಉಪ್ಪಾರ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಮಾಡುವಂತೆ ಮಾಜಿಶಾಸಕ ಡಾ.ನಾರಾಯಣಗೌಡ ಆಗ್ರಹ.... ಹೇಮಾವತಿ ಎಡದಂಡ ನಾಲಾ ಆಧುನೀಕರಣ ಕಾಮಗಾರಿಯಲ್ಲಿ ಭಾರೀ ಗೋಲ್ ಮಾಲ್... ಕಳಪೆ ಕಾಮಗಾರಿ ನಡೆಸಿ ಕೋಟ್ಯಾಂತರ ರೂಪಾಯಿ ಹಣ ಗುಳುಂ ಮಾಡಿರುವ ಎಂಜಿನಿಯರ್ ಗಳು ಮತ್ತು ಗುತ್ತಿಗೆದಾರರು... ಗುಣಮಟ್ಟದ ಕಾಮಗಾರಿ ನಡೆಸದೇ ಕಳಪೆ ಗುಣಮಟ್ಟದ ಕಾಮಗಾರಿ ನಡೆಸಿ  400ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ನುಂಗಿಹಾಕಿರುವ ಗುತ್ತಿಗೆದಾರರು...

ಈ ಹಿಂದೆ ಕೃಷ್ಣರಾಜಪೇಟೆ ನಂ.3 ವಿಭಾಗದ ಕಾರ್ಯಪಾಲಕ ಅಭಿಯಂತರರಾಗಿ ಪ್ರಭಾರದಲ್ಲಿದ್ದ ಚನ್ನರಾಯಪಟ್ಟಣ ಸೂಪರಿಂಟೆಂಡೆಂಟ್ ಎಂಜಿನಿಯರ್ ಮೋಹನರಾಜ ಅರಸ್ ಹಗರಣದ ಸೂತ್ರದಾರಿ...800ಕೋಟಿ ರೂಪಾಯಿಗಳ ವೆಚ್ಚದ ನಾಲಾ ಆಧುನೀಕರಣ ಕಾಮಗಾರಿ ಗುತ್ತಿಗೆಯನ್ನು ಪಡೆದಿರುವ ಉಪ್ಪಾರ್ ಕಂಪನಿಯೇ ಅಧಿಕಾರಿಗಳನ್ನು ಒಳಹಾಕಿಕೊಂಡು ಕಳಪೆ ಕಾಮಗಾರಿ ನಡೆಸಿ ಹಗರಣ ನಡೆಸಿರುವ ಬಗ್ಗೆ ಸ್ಥಳೀಯ ರೈತಮುಖಂಡರು ಮತ್ತು ಜನಪ್ರತಿನಿಧಿಗಳ ಆಕ್ರೋಶ.... ಕಳಪೆ ಗುಣಮಟ್ಟದ ಮರಳು, ಎಂ ಸ್ಯಾಂಡ್, ಜಲ್ಲಿ, ಸಿಮೆಂಟ್ ಬಳಸಿಕೊಂಡು ವೈಬರೇಟರ್ ಅನ್ನು ಬಳಸದೇ ಕಾಂಕ್ರೀಟ್ ಹಾಕಿ ನಾಲಾ ಲೈನಿಂಗ್ ಮತ್ತು ತಳಪಾಯ ಹಾಕಿರುವ ಉಪ್ಪಾರ್ ಕಂಪನಿ...ತನಗೆ ಬೇಕಾದ, ಕಳಪೆ ಕೆಲಸವನ್ನು ಬೆಂಬಲಿಸುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಂಡು ತನ್ನ ಕಂಪನಿಯ ಎಂಜಿನಿಯರ್ ಗಳಿಂದ ಎಂಬಿ ಬರೆಸಿ ಸಹಿ ಮಾಡಿಸಿಕೊಂಡು ಹಣವನ್ನು ಕೊಳ್ಳೆ ಹೊಡೆಯುತ್ತಿರುವ ಉಪ್ಪಾರ್ ಕಂಪನಿ ಹಾಗೂ ಇ.ಇ ಗಳಾಗಿದ್ದ ಜಯರಾಜ್ ಮತ್ತು ಮೋಹನರಾಜ ಅರಸ್ ಅವರ ವಿರುದ್ಧ ಕಾನೂನು ಕ್ರಮಜರುಗಿಸಿ ಸೇವೆಯಿಂದ ಅಮಾನತ್ತು ಮಾಡಿ ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯುತ್ತಿರುವ ಉಪ್ಪಾರ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಮಾಜಿಶಾಸಕ ಡಾ.ನಾರಾಯಣಗೌಡ ಆಗ್ರಹ....

Share this article

About Author

Super User