ಮಳವಳ್ಳಿ: ವಿದ್ಯುತ್ ತಂತಿ ತಗಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ ಘಟನೆ ಮಳವಳ್ಳಿತಾಲ್ಲೂಕಿನ ಕಂಸಾಗರ ಗ್ರಾಮದಲ್ಲಿ ನಡೆದಿದೆ
ಮಳವಳ್ಳಿ ತಾಲ್ಲೂಕಿನ ಕಂಸಾಗರ ಗ್ರಾಮದ ಹಾಡ್ಲಿ ಗ್ರಾಮ ಪಂಚಾಯಿತಿ ವಾಟರ್ ಮೆನ್ ಆಗಿ ಕೆಲಸಮಾಡುತ್ತಿದ ಸಿದ್ದರಾಜು(48)ಎಂಬವರು ಮೃತಪಟ್ಟ ದುದೈವಿ
ಇಂದುಬೆಳಗ್ಗೆ ನಿತ್ಯ ಕರ್ಮ ಗಳನ್ನು ಮಾಡಲೆಂದು ಜಮೀನಿನ ಬಳಿ ಬಂದಾಗ ವಿದ್ಯುತ್ ತಂತಿ ತಗಲಿ ಸ್ಥಳದಲ್ಲಿ ಸಾವುನಪ್ಪಿದ್ದಾನೆ.
ದುರಂತವೆಂದರೆ ಮೃತ ನ ತಾಯಿ ಕೆಂಪಮ್ಮನವರ ಉತ್ತರಕ್ರಿಯ ಅಧಿಕಾರಿ ಕಾರ್ಯವು ಇಂದೂ ನಡೆಯುತ್ತಿದೆ ಆದರಿಂದ ಇಂದು ಬೆಳಗ್ಗೆ ಜನಗಳನ್ನು ಅಡಿಗೆ ಮನೆ ಹತ್ತಿರ ಬರುವಂತೆ ತಿಳಿಸಿ ಬಯಲು ಶೌಚಾಲಯ ಎಂದು ತೆರಳಿದ್ದಾಗ ಈ ಅವಘಡ ಸಂಭವಿಸಿದೆ. ಈ ವಿಚಾರವಾಗಿ ಜಿಲ್ಲಾ ಪಂಚಾಯತ್ ಸದಸ್ಯ ರವಿ ಮಾತನಾಡಿ ಚೆಸ್ಕಾಂ ಅಧಿಕಾರಿಗಳಿಗೆ ಗ್ರಾಮದಲ್ಲಿ ವಿದ್ಯುತ್ ಕಂಬ ಹಾಗೂ ತಂತಿಗಳು ತುಂಡಾಗಿ ಎಂದು ತಿಳಿಸಿದರು ಇದುವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಅವರ ನಿರ್ಲಕ್ಷ್ಯತೆಯಿಂದ ಈ ಒಂದು ಘಟನೆ ನಡೆದಿದೆ ಆದುದರಿಂದ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದ್ದಾರೆ
ಈ ಸಂಬಂದ ಹಲಗೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.